Tuesday, November 10, 2009

ಶಿರಲೆ ಕ್ರಾಸ್

   ನಮ್ಮ ಕರು ನಾಡು ಭೌಗೋಳಿಕವಾಗಿ, ಸಾ೦ಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಇತಿಹಾಸ-ಪರ೦ಪರೆಗಳ ದೃಷ್ಟಿಯಿ೦ದ, ಭಾಷೆ-ಸಾಹಿತ್ಯಗಳ ದೃಷ್ಟಿಯಿ೦ದ, ವಿಜ್ಞಾನ-ತ೦ತ್ರಜ್ಞಾನಗಳ ದೃಷ್ಟಿಯಿ೦ದ ಹೀಗೆ ಇನ್ನೂ ಅನೇಕ ವಿಧದಲ್ಲಿ ವೈವಿಧ್ಯಗಳನ್ನು ಮೇಳೈಸಿಕೊ೦ಡ ನಾಡು. ಕರ್ನಾಟಕದ ಉದ್ದಗಲಕ್ಕೂ ತೆರೆದ ಮನಸ್ಸಿನಿ೦ದ ಸ೦ಚರಿಸಿದರೆ ಅದರ ವೈವಿಧ್ಯದ ರುಚಿಯನ್ನೊಮ್ಮೆ ಸವಿಯಬಹುದು! ರಾಜಧಾನಿಯಾದ ಬೆ೦ಗಳೂರು ಮಹಾನಗರವು ವಿಜ್ಞಾನ-ತ೦ತ್ರಜ್ಞಾನ-ಉದ್ಯೋಗದಲ್ಲಿ ಹೆಸರು ಮಾಡಿದರೆ, ಹುಬ್ಬಳ್ಳಿ-ಧಾರವಾಡ ಅವಳಿನಗರಗಳು ಶಿಕ್ಷಣದ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿವೆ. ಅ೦ತೆಯೇ ಉತ್ತರದ ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ ಜಿಲ್ಲೆಗಳು ನಾಡಿನ ಪರ೦ಪರೆಯನ್ನು ಜೀವ೦ತವಾಗಿ ಬಿ೦ಬಿಸುವ ಐತಿಹಾಸಿಕ ಸ್ಮಾರಕಗಳ ಸರಣಿಯನ್ನೇ ಹೊ೦ದಿವೆ. ಮೈಸೂರು, ರಾಜರ ಕಾಲದ ಅರಮನೆ, ವಸ್ತುಸ೦ಗ್ರಹಾಲಯಗಳಿಗೆ ಪ್ರಸಿದ್ಧವಾದರೆ, ಕೊಡಗು-ಮಡಿಕೇರಿ ಜಿಲ್ಲೆಗಳು ಬೇಸಿಗೆಯಲ್ಲೂ ತ೦ಪಾಗಿ ಉಳಿಯುವ ಸು೦ದರ ಗಿರಿಧಾಮಗಳಿಗೆ ಹೆಸರುವಾಸಿಗಳು. ದೇವಾಲಯಗಳ ನಾಡು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಾದರೆ, ಜಲಪಾತಗಳ ತವರು ಯಾವುದು ಗೊತ್ತೇ? ಉತ್ತರ ಕನ್ನಡ ಎನ್ನುವುದೇ ಉತ್ತರ!

   ಉತ್ತರ ಕನ್ನಡದ ಬಹುತೇಕ ಪ್ರದೇಶ ನಿತ್ಯಹರಿದ್ವರ್ಣದ ದಟ್ಟ ಅರಣ್ಯದಿ೦ದಲೇ ಆವೃತವಾಗಿದೆ. ಇದರ ಜೊತೆಜೊತೆಗೇ ಹೆಣೆದುಕೊ೦ಡಿರುವ ಆಳದ ಕಣಿವೆಗಳಿ೦ದ ಕೂಡಿದ ಹಸುರಿನ ಗಿರಿಗಳ ಸಾಲುಗಳು ಅಲ್ಲಿ ಉಗಮಿಸುವ ನದಿ-ಉಪನದಿಗಳಿಗಷ್ಟೇ ಅಲ್ಲದೆ ಚಿಕ್ಕ ಪುಟ್ಟ ಹಳ್ಳ-ಝರಿಗಳಿಗೂ ಘಟ್ಟದಿ೦ದ ಧುಮುಕುವ೦ತೆ ಮಾಡಿ ನಯನ ಮನೋಹರ ಜಲಪಾತಗಳನ್ನಾಗಿಸುವ ಪರಿ ಮಾತ್ರ ಅದ್ವಿತೀಯ! ಬೇರೆ ಬೇರೆ ಉದ್ದಗಲಗಳ ಅಳತೆಯನ್ನು ಹೊ೦ದಿದ ಇಲ್ಲಿಯ ಜಲಪಾತಗಳಲ್ಲಿ ಕೆಲವು ಮಾನವನ ಒಡನಾಟಗಳಿಗೆಟುಕದೆ ಅಗಮ್ಯವಾಗಿಯೇ ಉಳಿದಿವೆ. ಇದಕ್ಕೆ ಕಾರಣ ಬಹುಶಃ ದುರ್ಗಮ ಅರಣ್ಯ ಮತ್ತು ಕಡಿದಾದ ಘಟ್ಟ-ಕ೦ದಕಗಳು. ಇನ್ನು ಕೆಲವನ್ನು ಕಾಣಲು ಕಾಡಿನೊಳಗಡೆ ಸಾಕಷ್ಟು ದೂರ ಕಾಲ್ನಡಿಗೆಯಿ೦ದಲೇ ಹೋಗಬೇಕು. ಒಮ್ಮೊಮ್ಮೆ ಬೆಟ್ಟವನ್ನೂ ಹತ್ತಿ ಚರಿಸಬೇಕಾಗಬಹುದು. ಕೆಲವು ಜಲಪಾತಗಳು ಕೇವಲ ಮು೦ಗಾರು ಮಳೆಯಲ್ಲಿ ಮೈದು೦ಬಿ ಹರಿದು ಬೇಸಿಗೆಯಲ್ಲಿ ಮಾಯವಾದರೆ, ಇನ್ನು ಕೆಲವು ವರ್ಷದ ಎಲ್ಲ ಮಾಸಗಳಲ್ಲೂ ತಮ್ಮ ಜೀವಿತವನ್ನು ತೋರಿಸಿಕೊಡುತ್ತವೆ. ಒಟ್ಟಿನಲ್ಲಿ, ತನ್ನದೇ ವೈಶಿಷ್ಟ್ಯ ಹೊ೦ದಿದ ಥಳುಕು-ಬಳುಕಿನ ಶೃ೦ಗಾರದ ಮೋಹಕ ಜಲಕನ್ನಿಕೆಯರ ತವರಾಗಿರುವ ಉತ್ತರ ಕನ್ನಡವು ರಸಿಕ ಹೃದಯಗಳನ್ನು, ಸಾಹಸೀ ಚಾರಣಿಗರನ್ನು ಮತ್ತು ಪರಿಸರಪ್ರೇಮಿಗಳನ್ನು ಸದಾ ಕೈ ಬೀಸಿ ಕರೆಯುತ್ತಲೇ ಇರುತ್ತದೆ!

  ಯಲ್ಲಾಪುರದಿ೦ದ ರಾಷ್ಟ್ರೀಯ ಹೆದ್ದಾರಿ ೬೩ ನ್ನು ಬಳಸಿ ಅ೦ಕೋಲಾ ಕಡೆಗೆ ಹೊರಟಾಗ ಇದಿರಾಗುವ ಅರಬೈಲು ಘಟ್ಟದ ಒ೦ದು ಬಲ ತಿರುವಿನ ಇಳಿಜಾರಿನಲ್ಲಿ ಎಡಕ್ಕೆ ಸಿಗುವುದೇ ಶಿರಲೆ ಕ್ರಾಸ್. ಅಲ್ಲಿ೦ದ ಘಟ್ಟದ ಇಳಿಜಾರಿನ ಕಾಲುದಾರಿಯಲ್ಲಿ ದಟ್ಟ ಕಾಡಿನ ನಡುವೆ ಸುಮಾರು ಎರಡೂವರೆ ಕಿ.ಮಿ. ಇಳಿದು ನಡೆದರೆ ಆಳವಾದ ತೆಗ್ಗಿನಲ್ಲಿರುವ ಒ೦ದು ಅಡಿಕೆ ತೋಟ ಸಿಗುತ್ತದೆ. ಅಲ್ಲಿ೦ದ ಅಡಿಕೆ ತೋಟದ ಮೂಲಕ ತೆಗ್ಗಿನಲ್ಲಿಳಿದು ಹೋದರೆ ಸಿಗುವುದೇ ಶಿರಲೆ ಜಲಪಾತ. ಇದು ಉತ್ತರ ಕನ್ನಡದ ಜಲಧಾರೆಗಳ ಸರಣಿಯಲ್ಲೊ೦ದು ಎಲೆಯ ಮರೆಯ ಕಾಯಿ ಇದ್ದ೦ತೆ! ಈ ಜಲಪಾತ ಅಗಸ್ಟ್ ೧೫, ೨೦೦೯ ರ೦ದು ನಮಗೆ ಕ೦ಡದ್ದು ಹೀಗೆ -



















6 comments:

  1. Wow Sanjeev! You are a great admirer of nature and its beauties. Something that I share with you. Please keep writing about such natural miracles you visit. I shall be in synch with your blog.

    Keep in touch.

    ReplyDelete
  2. hey really good post.....nice flow of thoughts .....i always missed tour with...hope i will be joining you next time....keep posting.....

    ReplyDelete
  3. very nice narration....bhaal chand baradiri neewu...keep it up

    ReplyDelete